ವಿಶೇಷ ಸೂಚನೆ

"ಕೋವಿಡ್-19 ಕರೋನ ಸಂಕ್ರಾಮಿಕ ಕಾಯಿಲೆ ಇದಕ್ಕೆ ಭಯ ಬೇಡ, ಎಚ್ಚರಿಕೆ ಇರಲಿ". 1) ಸಾಮಾಜಿಕ ಅಂತರವಿರಲಿ 2) ಮಾಸ್ಕನ್ ಕಡ್ಡಾಯವಾಗಿ ಧರಿಸಬೇಕು 3)ಯಾವುದೇ ವಸ್ತುವನ್ನು ಮುಟ್ಟಿದಾಗ ಸಾಬೂನಿನಿಂದ ಕೈ ತೊಳಿಯಿರಿ 4)ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಗಮನ ಇರಲಿ.5)ಬಿಸಿನೀರನ್ನು ಕುಡಿಯುವುದು ಉತ್ತಮ 6) ಮನೆಯಲ್ಲಿರುವ ತಂದೆ/ತಾಯಿಗಳಿಗೆ ಮತ್ತು ಹಿರಿಯರಿಗೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ಹಾಕಿಸಿ ಕೊಳ್ಳಲು ಹೇಳಿ. 7) ಆರೋಗ್ಯ ಸೇತು ಆ್ಯಪ್ ಬಳಸಿದರೆ ಉತ್ತಮ. ಇವುಗಳನ್ನು ಪಾಲಿಸಿದರೆ ಈ ರೋಗದಿಂದ ಅಪಾಯ ಇರುವುದಿಲ್ಲ.

Wednesday, 21 October 2020

ವಿಶ್ವಮಾನವಗೀತೆ – ಕುವೆಂಪು

 

ವಿಶ್ವಮಾನವಗೀತೆ 

ನನ್ನ ಚೇತನ,
ಆಗು ನೀ ಅನಿಕೇತನ!

ರೂಪರೂಪಗಳನು ದಾಟಿ,
ನಾಮಕೋಟಿಗಳನು ಮೀಟಿ,
ಎದೆಯ ಬಿರಿಯೆ ಭಾವದೀಟಿ,
ನನ್ನ ಚೇತನ,
ಆಗು ನೀ ಅನಿಕೇತನ!

ನೂರು ಮತದ ಹೊಟ್ಟ ತೂರಿ,

ಎಲ್ಲ ತತ್ತ್ವದೆಲ್ಲೆ ಮೀರಿ,
ನಿರ್ದಿಗನ೦ತವಾಗಿ ಏರಿ,
ನನ್ನ ಚೇತನ,
ಆಗು ನೀ ಅನಿಕೇತನ!

ಎಲ್ಲಿಯೂ ನಿಲ್ಲದಿರು;
ಮನೆಯನೆ೦ದೂ ಕಟ್ಟದಿರು;
ಕೊನೆಯನೆ೦ದೂ ಮುಟ್ಟದಿರು;
ಅನ೦ತವಾಗಿರು!
ನನ್ನ ಚೇತನ,
ಆಗು ನೀ ಅನಿಕೇತನ!

ಅನ೦ತ ತಾನ್ ಅನ೦ತವಾಗಿ
ಆಗುತಿಹನೆ ನಿತ್ಯಯೋಗಿ;
ಅನ೦ತ ನೀ ಅನ೦ತವಾಗು;
ಆಗು, ಆಗು, ಆಗು, ಆಗು,
ನನ್ನ ಚೇತನ,
ಆಗು ನೀ ಅನಿಕೇತನ
!

                                                 ----------------- PÀĪÉA¥ÀÄ

No comments:

Post a Comment